ನಾನು ರವಿಪ್ರಕಾಶ ಒಬ್ಬ ಭಾರತೀಯ ಕನ್ನಡಿಗ ಮತ್ತು ಓಂಕಾರ ಸಮಿತಿಯ ಒಬ್ಬ ಕಾರ್ಯಕರ್ತ. ನಮ್ಮೆಲ್ಲರ ಗೆಳೆಯರಾದ ಶ್ರೀ ರಂಗನಾಥರವರು ಡಿಸೆಂಬರ್ ೨೭ ರ " ಶ್ರೀ ಆಂಜನೇಯ ಸ್ವಾಮಿ ಪೂಜೆ", ಯ ಸಮಾರಂಭದ ಬಗ್ಗೆ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿ ಅವರ ಅನಿಸಿಕೆಯನ್ನು ನೀಡಿದ್ದಾರೆ, ಅವರಿಗೆ ಧನ್ಯವಾದವನ್ನು ಅರ್ಪಿಸುತ್ತ, ನನ್ನ ಒಂದು ಮನಸ್ಸಿನ ಭಾವನೆಯನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುವ ಬಯಕೆ.
ಶೀಘ್ರವಾಗಿ ನನ್ನ ಅನಿಸಿಕೆಯನ್ನು ಬರೆಯಲು ಅಗದೆ, ಒಂದು ವಾರದ ನಂತರ ಬರೆಯುವ ಮನಸ್ಸಾಗಿದೆ. ಅದಕ್ಕೂ ಒಂದು ಕಾರಣವಿದೆ, ಅದೇನೆಂದರೆ, ಆ ದಿನದ ಮತ್ತು ಅದರ ಹಿಂದಿನ ದಿನದ ತಯಾರಿ --- ಇದನ್ನೆಲ್ಲ ಮೆಲುಕು ಹಾಕುತ್ತ ಹಾಕುತ್ತ ದಿನ ಕಳೆದದ್ದೆ ಗೊತ್ತಾಗದೆ, ನಂತರ ಆ ಭಾವನೆಯನ್ನೆಲ್ಲ ಈ ಬರಹ ಮೂಲಕ ತಿಳಿಸುವ ಎಂದು ಮನಸ್ಸಾಗಿದ್ದೆ ಇಂದು. ಹಾಗಾಗಿ ಇಲ್ಲಿದೆ ಒಂದು ಸಣ್ಣ ಪ್ರಯತ್ನವಿದು. ತಪ್ಪಿದ್ದರೆ ಕ್ಷಮೆ ಇರಲಿ.
ನಾನು ಈ ಹಿಂದಿನ ವರ್ಷದ ೨೦೧೨-"ಶ್ರೀ ಆಂಜನೇಯ ಸ್ವಾಮಿಯ ಪೂಜೆ" ಯ ಸಮಾರಂಭದಲ್ಲಿ ಒರ್ವ ಭಕ್ತನಾಗಿ ಒಂದು ಚಿಕ್ಕ ಸೇವೆ ಕೊಟ್ಟು ತೀರ್ಥ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರನಾಗಿದ್ದ ಅನುಭವ ಅಷ್ಟೇ ಅಗಿತ್ತು. ಆಗ ಆದ ಅನುಭವ ಸಹ ತುಂಬಾ ಅದ್ಭುತ. ಅದನ್ನು ನಾನು ಈಗಾಗಲೇ ನನ್ನ ಈ ಮೊದಲಿನ ಅನಿಸಿಕೆಯಲ್ಲಿ ತಿಳಿಸಿದ್ದೇನೆ.
ಈ ವರ್ಷದ ೨೦೧೩- "ಶ್ರೀ ಆಂಜನೇಯ ಸ್ವಾಮಿಯ ಫೂಜೆ" ಸಮಾರಂಭದ ಅನುಭವವೇ ಅತಿ ಅದ್ಭುತ. ಅದು ಹೇಗೆಂದರೇ, ನಾನು ಈ ಸಲದ ಪೂಜೆಯಲ್ಲಿ ಬರಿ ಭಕ್ತನಾಗದೆ, ಅಲ್ಲಿ ಇರುವ ಎಲ್ಲ ಅನುಭವಿಗಳೊಂದಿಗೆ ಕೈ ಜೋಡಿಸಿ ಆ ಕಾರ್ಯಕ್ರಮಕ್ಕೆ ನನ್ನ ಅಳಿಲು ಸೇವೆಯನ್ನು ಮನಃಪೂರ್ವಕ ನೀಡಿ ಆ ದೇವರ ಕೃಪೆಗೆ ಪಾತ್ರನಾದ ಅನುಭವ ಅದ್ಭುತ. ಆದಕ್ಕೆ ನಾನು ’ಓಂಕಾರ ಸಮಿತಿಯ’ಯ ಎಲ್ಲ ಹಿರಿಯರಿಗೂ ಮತ್ತು ಮಿತ್ರರಿಗೂ ಧನ್ಯವಾದವನ್ನು ಹೇಳಲು ಇಚ್ಚಿಸುತ್ತೇನೆ.
’ಓಂಕಾರ ಸಮಿತಿ’ ಈಗಾಗಲೇ ಸುಮಾರು ಅರ್ಥಪೂರ್ಣ ಧಾರ್ಮಿಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ವಿಷಯ ಎಲ್ಲರಿಗೂ ಗೊತ್ತು. ಇಲ್ಲಿ ಹೊರದೇಶದಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸುವ ಮೂಲಕ ನಮಗೆಲ್ಲ ನಮ್ಮ ಸಂಸ್ಕೃತಿಯ ಸೊಗಡನ್ನು ಉಣಬಡಿಸುವ ಮತ್ತು ಮರೆಯದಂತೆ ಕಾಪಾಡುವ ದೊಡ್ಡ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ. ಅದಕ್ಕೆ ನಾನು (ನಾವೆಲ್ಲರೂ) ಚಿರಋಣಿ.
" ಅಲ್ಲಿದೆ (ಭಾರತ) ನಮ್ಮ ಮನೆ, ಇಲ್ಲಿ (ಓಮನ್) ಇರುವದು ಸುಮ್ಮನೆ" ಅಂತ ಎಲ್ಲರೂ ಹೇಳೋ ಮಾತನ್ನ ಈಗ ಓಂಕಾರ ಸಮಿತಿ ಸುಳ್ಳು ಮಾಡಿದ್ದಾರೆ - " ಭಾರತದಲ್ಲಿದೆ ನಮ್ಮ ಮನೆ ಆದರೂ ಓಮಾನನಲ್ಲಿ ನೋಡಬಹುದು ನಮ್ಮ ಆ ಭಾರತದ ಮನೆಯನ್ನ (ಸಂಸ್ಕೃತಿಯನ್ನ)" ಎಂಬ ಭಾವನೆ ಮೂಡುವಂತಹ ಕಾರ್ಯವನ್ನು ’ಓಂಕಾರ ಸಮಿತಿ’ ಕೈಗೆತ್ತಿಕೊಂಡಿದೆ.
ಮೊನ್ನೆ ನಡೆದ "ಶ್ರೀ ಆಂಜನೇಯ ಸ್ವಾಮಿಯ ಫೂಜೆ"ಯೇ ಸಾಕ್ಷಿಯಾಗಿದೆ, ಅಂದು ನೆರೆದ ಭಕ್ತ ಸಮೂಹ ನೋಡಿದಾಗಲೇ - ಶ್ರೀ ಆಂಜನೇಯ ಸ್ವಾಮಿ ತನ್ನ ಪೂಜೆಯನ್ನ ಸಂಪೂರ್ಣವಾಗಿ ಸ್ವೀಕರಿಸಿಕೊಂಡು ಬಂದ ಭಕ್ತಾದಿಗಳಿಗೆ ಅವನು ಸಂಪೂರ್ಣ ಅಶೀರ್ವದಿಸಿದ್ದಾನೆ ಎಂಬ ಭಾವನೆ ಮೂಡಿತು.
ಈ ಸಮಾರಂಭ ಆದ ರೀತಿಯಿಂದ ತಿಳಿಯಿತು - "ಒಂದು ಕೈಯಿಂದ ಚಪ್ಪಾಳೆಯಿಂದ ಶಬ್ದ ಸ್ತಬ್ದಾ - ಅದೇ ಎರಡು ಕೈ ಜೋಡಿಸಿ ಚಪ್ಪಾಳೆಯೇ ಶಬ್ದಾ" ಅಂತ ಮಾತು ಸತ್ಯ ಎಂದು ನಿರೂಪಿಸಿದ್ದೆ ನಮ್ಮ ’ಓಂಕಾರ ಸಮಿತಿ’ ತಮ್ಮ ಎಲ್ಲ ಕಾರ್ಯಕ್ರಮದ ಮೂಲಕ. ಅಂದರೆ ಅಲ್ಲಿ ಇರುವ ಎಲ್ಲ ಅನುಭವಿಗಳು ಒಟ್ಟಾಗಿ ಸೇರಿ ಕೆಲಸವನ್ನು ಹಂಚಿಕೊಂಡು, ತುಂಬು ಮನಸ್ಸಿನಿಂದ ಎಲ್ಲೂ ಲೋಪವಾಗದ ಹಾಗೆ ಕಾರ್ಯ ನಿರ್ವಹಿಸಿದ್ದಾರೆ ಎನ್ನುವದಕ್ಕೆ ಅವರ ಕಾರ್ಯಕ್ರಮಗಳೆ ಸಾಕ್ಷಿಯೆಂದರೆ ತಪ್ಪಾಗಲಾರದು.
ಹೀಗೆ ನಮ್ಮ ’ಓಂಕಾರ ಸಮಿತಿ’ಯ ಎಲ್ಲ ಸದಸ್ಯರಿಗೂ ಆ ದೇವರು ಇನ್ನೂ ಒಳ್ಳೆ ಒಳ್ಳೆಯ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲು ಶಕ್ತಿ, ಭಕ್ತಿ, ಸ್ಥೈರ್ಯ, ಒಳ್ಳೆಯ ಮನಸ್ಸು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತ ನನ್ನ ಮನಸ್ಸಿನ ಆಳದಲ್ಲಿದ್ದ ಅನಿಸಿಕೆಯನ್ನು ನಿಮೊಂದಿಗೆ ಹಂಚಿಕೊಂಡು ಸಮಾಪ್ತಗೊಳಿಸುತ್ತೇನೆ. ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.
ಎಲ್ಲರಿಗೂ ಧನ್ಯವಾದಗಳು
ಇಂತಿ ನಿಮ್ಮವರಲ್ಲಿ ಒಬ್ಬನಾದ,
ರವಿ ಪ್ರಕಾಶ್ ಏ. ಯಸ್.
ದೂರವಾಣಿ- ೯೬೮ ೯೫೫೬೨೬೭೫.