ವಿಭಾಗಗಳು

Wednesday, February 5, 2014

|| ಬ್ರಹ್ಮಾನಂದ ಓಂಕಾರ, ಆತ್ಮಾನಂದ ಝೇಂಕಾರ ||

 ಲೇಖಕರು: ರವಿಪ್ರಕಾಶ  ಎ. ಎಸ್.   

ಎಲ್ಲ ಭಕ್ತಾದಿಗಳಿಗೂ ಈ ಕಿರಿಯನ ನಮಸ್ಕಾರ,

"ಬ್ರಹ್ಮಾನಂದ ಓಂಕಾರ, ಆತ್ಮಾನಂದ ಝೇಂಕಾರ" 
ಅನ್ನುವ ಹಾಗೆ
"ಓಂಕಾರ ಸಮಿತಿ - ಓಂಕಾರ ಝೇಂಕಾರ"


"ಓಂಕಾರ ಸಮಿತಿ" ಎಂದ ಕ್ಷಣವೇ ಒಂದು "ಓಂಕಾರದ ಝೇಂಕಾರ", ಮೊಳಗಿಸಿದಂತಾಗುಹುದು, ಎಂದು ಹೇಳೋದಕ್ಕೆ ಇಷ್ಟಪಡುತ್ತೇನೆ. ಅದೇಕೆ ಹಾಗಾಗುತ್ತೆ ಅಂತ ನೀವು ಕೇಳಬಹುದು, ಅದೇ ಅದರ ಗುಟ್ಟು. 

"ಓಂಕಾರ ಸಮಿತಿ" ಈ ವರೆಗೆ ನಡೆಸಿಕೊಂಡು ಬಂದಂತ ಎಲ್ಲ ಕಾರ್ಯಕ್ರಮಗಳನ್ನು ಮೆಲುಕು ಹಾಕುತ್ತ ಬರುವ ಎಲ್ಲ ಭಕ್ತಾದಿಗಳಿಗೂ ಅನ್ನಿಸುಹುದು ಏನೆಂದರೆ, ಈ ಸಮಿತಿ ಎಂತೆಂತಹ ಉಪಯುಕ್ತ, ಸಂಯುಕ್ತ, ಧಾರ್ಮಿಕ ಕಾರ್ಯಕ್ರಮಗಳನ್ನು ನಿಸ್ವಾರ್ಥದಿಂದ ಈ ಹೊರ ದೇಶದಲ್ಲಿ ಇರುವ ನಮ್ಮೆಲ್ಲರಿಗೂ ನೀಡುತ್ತ ಬಂದಿದೆ ಅಲ್ಲವಾ - ಅನ್ನೋ ಮಾತೆ "ಓಂಕಾರದ ಝೇಂಕಾರ".

ನಾನೇನು ಹೇಳಲು ಬಂದೆ ಅಂದ್ರೆ, ಈಗ ಇನ್ನೊಂದು ಸುದಿನವನ್ನು ಉಣಬಡಿಸಲು ಮುಂದಾಗಿದ್ದಾರೆ ನಮ್ಮ "ಓಂಕಾರ ಸಮಿತಿ". ಅದೇ "ಶ್ರೀ ಸತ್ಯನಾರಾಯಣ ಪೂಜೆ ೨೦೧೪". ಇದೇ ಸಂವತ್ಸರದ ಮುಂದಿನ ಮಾರ್ಚ್ ಮಾಸದ ೧೪ ನೇ ದಿನದಂದು ಹಮ್ಮಿಕೊಂಡಿದ್ದಾರೆ. ಈ ಒಂದು ಧಾರ್ಮಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಿಮಗೆಲ್ಲರಿಗೂ ತಲುಪಿಸುವ ಕಾರ್ಯ ಓಂಕಾರ ಸಮಿತಿ ಮಾಡಿರುತ್ತದೆ, ಅದರಲ್ಲಿ ಸಂಶಯವಿಲ್ಲ. 

ಭಕ್ತಾದಿಗಳಲ್ಲಿ ಒಂದು ನಮ್ರ ವಿನಂತಿ ಅದೇನೆಂದರೇ "ಓಂಕಾರ ಸಮಿತಿ" ನಡೆಸುವ ಈ ನಿಸ್ವಾರ್ಥ ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸ್ವಯಂ ಇಚ್ಚೆಯಿಂದ ಮುಂದಾಗಿ ಬಂದು ಅವರೊಂದಿಗೆ ಆದಷ್ಟು ನಮ್ಮ ಕೈ ಜೋಡಿಸಿ,  ನಮ್ಮ ಒಂದು ಚಿಕ್ಕ ’ಅಳಿಲು ಸೇವೆ’ ಎಂದು ಮನಃಪೂರ್ವಕವಾಗಿ ಆ ದೇವರಲ್ಲಿ ಪ್ರಾರ್ಥಿಸಿ ಈ ಸುಂದರ ದೇವರ ಕಾರ್ಯಕ್ರಮ ಅತಿ ಭಕ್ತಿಭಾವದಿಂದ ನೆರವೇರಿಸಲು ನೀವೆಲ್ಲರೂ ಸಹಕರಿಸಿ ಆ ಭಗವಂತನ ಕೃಪೆಗೆ ಪಾತ್ರರಾಗುವಿರಾಗಿ ನಂಬಿದ್ದೇನೆ. 

ಈ ಸಂದರ್ಭದಲ್ಲಿ ಇನ್ನೊಂದು ವಿಷಯ ಹೇಳಲು ಇಷ್ಟಪಡುತ್ತೇನೆ, ಅದೇನೆಂದರೆ, ಮುಂಬರುವ ದಿನಗಳಲ್ಲಿ ಅನೇಕಾನೇಕ ಸುಂದರ ಕಾರ್ಯಕ್ರಮಗಳನ್ನು ಉಣಬಡಿಸಲು ಹೊಸ ಹೊಸ ಯೋಜನೆಗಳನ್ನು ನಮ್ಮ "ಓಂಕಾರ ಸಮಿತಿ" ಹಮ್ಮಿಕೊಂಡಿದೆ ಎಂಬ ವಿಷಯ ಕೇಳಿ ತುಂಬ ಹೆಮ್ಮೆ ಆಗುತ್ತದೆ. ಆದಕ್ಕಾಗಿ ನಾವೆಲ್ಲರೂ ಕೈಜೋಡಿಸುವ ಪ್ರಯತ್ನ ಮಾಡೋಣ ಅಲ್ವಾ? ಆದಕ್ಕಾಗಿ ಆ ಭಗವಂತನು "ಓಂಕಾರ ಸಮಿತಿ" ಯ ಎಲ್ಲ ಸದಸ್ಯರಿಗೂ ನಿಸ್ವಾರ್ಥ, ತುಂಬು ಮನಸ್ಸು, ಶಕ್ತಿಯನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವ. ಎಲ್ಲ ಭಕ್ತಾದಿಗಳ ಪರವಾಗಿ ’ಓಂಕಾರ ಸಮಿತಿ" ಗೆ ನನ್ನ ಧನ್ಯವಾದಗಳನ್ನು ಹೇಳುತ್ತೇನೆ.

ಹಾಗೇ ಆ ಭಗವಂತ ಸರ್ವರಿಗೂ,’ಆಯುರ್, ಆರೊಗ್ಯ, ಐಶ್ವರ್ಯ, ನೆಮ್ಮದಿಯನ್ನು’ ದಯಪಾಲಿಸಲಿ ಎಂದು ಬೇಡುತ್ತ ನನ್ನ ಮನದಾಳದ ಎರಡು ಮಾತುಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಓದುವಿರಲ್ಲವೆ?

ನಿಮ್ಮ ಅಮೂಲ್ಯವಾದ ಸಮಯ ಕೊಟ್ಟು, ತಾಳ್ಮೆಯಿಂದ ಓದಿದ್ದಕ್ಕೆ ನನ್ನ ಅನಂತಾನಂತ ಧನ್ಯವಾದಗಳು ಮತ್ತು ನಮಸ್ಕಾರಗಳು. 

ಇಂತಿ ನಿಮ್ಮವ,
ರವಿ ಪ್ರಕಾಶ್ ಏ. ಎಸ್.
ಕರೆ ಅಂಕೆ: +೯೬೮ ೯೫೫೬೨೬೭೫

No comments:

Post a Comment